ಬಂದಿದೆ ಕೃಷಿಸ್ನೇಹಿ 'ಕ್ರಿಯಾಜೆನ್ ಅ್ಯಪ್'

"ಉತ್ತಮ ಇಳುವರಿ ಪಡೆಯಲು ಕೃಷಿಕರು ಶ್ರಮ ಪಡುತ್ತಾರೆ. ಇಂಥ ಸಂದರ್ಭದಲ್ಲಿ ಬಳಸಬೇಕಾದ ಪೋಷಕಾಂಶ, ಬೆಳೆವರ್ಧಕಗಳ ಮಾಹಿತಿ ಅಗತ್ಯವಾಗಿರುತ್ತದೆ. ಸಸ್ಯರೋಗಗಳು, ಕೀಟಬಾಧೆ ಕಂಡು ಬಂದ ಸಂದರ್ಭದಲ್ಲಿಯೂ ಶೀಘ್ರ ಪರಿಹಾರಕ್ಕಾಗಿ ಅವರಿಗೆ ವೈಜ್ಞಾನಿಕ ನೆಲೆಗಟ್ಟಿನ ಸಲಹೆ ಸೂಚನೆಗಳು ಬೇಕಿರುತ್ತವೆ. ನಿಟ್ಟಿನಲ್ಲಿ ತತಕ್ಷಣ ಅವರಿಗೆ ಪರಿಹಾರ ಸೂಚಿಸುವ ಸಲುವಾಗಿ 'ಕ್ರಿಯಾಜೆನ್ ಅಗ್ರಿ ಅ್ಯಪ್' ಅಭಿವೃದ್ಧಿ ಪಡಿಸಲಾಗಿದೆ" ಎಂದು ಕೃಷಿ ವಿಜ್ಞಾನಿ ಮತ್ತು ಕ್ರಿಯಾಜೆನ್ ಸಂಸ್ಥೆ ಮುಖ್ಯಸ್ಥರೂ ಆದ ಡಾ.ಬಸವರಾಜ ಗಿರೆಣ್ಣವರ್ ವಿವರಿಸಿದರು.

ಕರ್ನಾಟಕದ ಕೃಷಿರಂಗಕ್ಕೆ 'ಕೃಷಿ ಅ್ಯಪ್' ಹೊಸ ಪರಿಕಲ್ಪನೆ. ಇದನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಕ್ರಿಯಾಜೆನ್ ವಿಶೇಷ ಆಸಕ್ತಿ-ಶ್ರಮ ವಹಿಸುವುದರ ಜೊತೆಗೆ ಅಪಾರ ಹಣವನ್ನೂ ವೆಚ್ಚ ಮಾಡಿದೆ. ಪ್ರಸ್ತುತ ಲಭ್ಯ ಇರುವ ವೈಜ್ಞಾನಿಕ ಸಾಧನ-ಸಲಕರಣೆಗಳನ್ನು ಬಳಸಿಕೊಂಡು ಕೃಷಿಕ್ಷೇತ್ರವನ್ನು ಸರ್ವರೀತಿಯಲ್ಲಿಯೂ ಬಲಿಷ್ಠಗೊಳಿಸಲು ಅಗತ್ಯವಾಗಿರುವ ಅಂಶಗಳು 'ಕ್ರಿಯಾಜೆನ್ ಅಗ್ರಿ ಅ್ಯಪ್' ನಲ್ಲಿ ಅಡಕವಾಗಿವೆ.
ಪರಿಣಿತ ತಂಡ:
ಕೃಷಿ ಅ್ಯಪ್ ನಿರ್ವಹಣೆ ಮಾಡುವ ಕೇಂದ್ರಸ್ಥಾನದಲ್ಲಿ ಕೃಷಿಯ ವಿವಿಧ ವಿಭಾಗ-ವಿಷಯಗಳ ಕೃಷಿವಿಜ್ಞಾನಿಗಳಿರುತ್ತಾರೆ. ಕೃಷಿಕರು ಇವರಿಗೆ ಪೋನ್ ಮಾಡಿ ತಮಗೆ ಅಗತ್ಯವಾಗಿರುವ ಸಲಹೆಗಳನ್ನು ಪಡೆಯಬಹುದು. ಚಾಟ್ ಕೂಡ ಮಾಡಬಹುದು. ಇದರಿಂದ ಸಕಾರಾತ್ಮಕ ಚರ್ಚೆ-ಪರಿಹಾರ ಸೂಚಿಸುವಿಕೆ ಸಾಧ್ಯವಾಗುತ್ತದೆ.
"ಇಲ್ಲಿ ಬಹುಮುಖ್ಯವಾದ ವಿಷಯವೇನೆಂದರೆ ಕೃಷಿಕರು ಸಲಹೆ-ಸೂಚನೆ ಸಲುವಾಗಿ ಕೃಷಿವಿಜ್ಞಾನಿಗಳನ್ನು ಕಾಣಲು ದೂರದ ಊರುಗಳಿಗೆ ತೆರಳುವ ಅಗತ್ಯ ಇಲ್ಲ. ತಮ್ಮ ಹೊಲದಲ್ಲಿಯೇ ಇದ್ದು ಸಲಹೆ ಪಡೆಯಬಹುದು. ಇದರಿಂದ ಅನಗತ್ಯ ಓಡಾಟದ ಶ್ರಮ ತಪ್ಪುವುದಲ್ಲದೇ ಹಣ ಕೂಡ ಉಳಿತಾಯ ಆಗುತ್ತದೆ. ಅತ್ಯಗತ್ಯ ಸಂದರ್ಭಗಳಲ್ಲಿ ನಮ್ಮ ಕೃಷಿವಿಜ್ಞಾನಿಗಳೇ ಕೃಷಿಕರ ಹೊಲಗಳಿಗೆ ತೆರಳಿ ಪರಿಹಾರ ಕ್ರಮಗಳನ್ನು ಸೂಚಿಸುತ್ತಾರೆಎಂದು ಕೃಷಿವಿಜ್ಞಾನಿ ಮತ್ತು ಸಂಸ್ಥೆಯ ಹಿರಿಯ ಅಧಿಕಾರಿ ಡಾ. ಆರ್. ಮಂಜುನಾಥ್ ತಿಳಿಸಿದರು.
ಆಂಡ್ರಾಯ್ಡ್ ನಿರ್ವಹಣೆಯ ಮೊಬೈಲ್:
ಅಗ್ರಿ ಅ್ಯಪ್ ಎಂದರೆ ಮಾಹಿತಿ ತಂತ್ರಜ್ಞಾನ ಯುಗದ ಮೊಬೈಲ್ ಕೈಪಿಡಿ ಎಂದರೆ ಖಂಡಿತ ಉತ್ಪ್ರೇಕ್ಷೆ ಆಗುವುದಿಲ್ಲ. ಏಕೆಂದರೆ ಕೃಷಿಕರು ತಾವು ನಿಂತಲ್ಲಿಯೇ ಅವಶ್ಯಕವಾದ ಮಾಹಿತಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿರುವುದು. ಅವರು ತಾವು ಬೆಳೆಯುತ್ತಿರುವ, ಬೆಳೆಯಲು ಉದ್ದೇಶಿಸಿರುವ ಬೆಳೆಗಳು, ಸಸ್ಯ ಪೋಷಕಾಂಶ ನಿರ್ವಹಣೆ, ಅವುಗಳಿಗೆ ಬಾಧಿಸಬಹುದಾದ ಕೀಟಗಳು, ರೋಗಗಳ ಬಗ್ಗೆ ತಿಳಿದುಕೊಳ್ಳಬಹುದು. ಇಷ್ಟೆಲ್ಲ ಮಾಹಿತಿ ಪಡೆದುಕೊಳ್ಳಲು ಆಂಡ್ರಾಯ್ಡ್ ತಂತ್ರಾಂಶ ನಿರ್ವಹಣೆ ಇರುವ ಸ್ಮಾರ್ಟ್ ಪೋನ್ ಅವಶ್ಯಕ.
ವಿಡಿಯೋ ರವಾನಿಸಬಹುದು:
ಸಂಸ್ಥೆಯ ಕೃಷಿವಿಜ್ಞಾನಿಗಳು ಹೊಲದಲ್ಲಿನ ಸಮಸ್ಯೆಯನ್ನು ಮತ್ತಷ್ಟು ನಿಖರವಾಗಿ ತಿಳಿಯುವಂತೆ ಸ್ಥಿರ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಕಳಿಸಬಹುದು. ಇದನ್ನು ವಿಕ್ಷೀಸಿದ ನಂತರ ಬೆಳೆಯನ್ನು ಬಾಧಿಸುತ್ತಿರುವ ನಿರ್ದಿಷ್ಟ ರೋಗ ಅಥವಾ ಕೀಟ ಯಾವುದು ಎಂದು ಕೃಷಿ ವಿಜ್ಞಾನಿಗಳು ತಿಳಿಯುತ್ತಾರೆ. ಕೂಡಲೇ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸುತ್ತಾರೆ.
ಚಾಟ್/ಪೋನ್ ಮಾಡುವಿಕೆ:
ಕೃಷಿ ಅ್ಯಪ್ ತಂತ್ರಾಂಶದಲ್ಲಿ ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳನ್ನು ಬಳಸುವ ಅವಕಾಶ ಇದೆ. ಕೃಷಿಕರು ತಮಗೆ ಅನುಕೂಲವಾದ ಭಾಷೆಯಲ್ಲಿ ಚಾಟ್ ಮಾಡಬಹುದು, ಮಾತನಾಡಬಹುದು. ಭಾಷೆಗಳಲ್ಲಿ ನಿರರ್ಗಳವಾಗಿ ಸಂಭಾಷಿಸಬಲ್ಲ ಪರಿಣಿತರು ಕೇಂದ್ರಸ್ಥಾನದಲ್ಲಿ ಇರುತ್ತಾರೆ. ಇವರಿಗೆ ಕರೆ ಮಾಡಲು ಕೃಷಿಕರು ಮೊಬೈಲಿನಲ್ಲಿ ನಂಬರ್ ಡಯಲ್ ಮಾಡುವ ಅವಶ್ಯಕತೆ ಇಲ್ಲ. ಅ್ಯಪ್ ನಲ್ಲಿ ಇರುವ ಕರೆ ಬಟನ್ ಅದುಮಿದರೆ ಕೇಂದ್ರಸ್ಥಾನದಲ್ಲಿ ಪೋನ್ ರಿಂಗಾಗುತ್ತದೆ. ಕರೆ ಸ್ವೀಕೃತವಾಗಿ ಪರಿಣಿತರು 'ಹಲೋ ಕ್ರಿಯಾಜೆನ್' ಎಂದು ಹೇಳುತ್ತಾರೆ.
ತಕ್ಷಣ ಕರೆ ಸ್ವೀಕಾರ:
ಮೊಬೈಲ್ಗಳ ಕಾಲ್ ಸೆಂಟರಿಗೆ ಗ್ರಾಹಕರು ಕರೆ ಮಾಡಿದಾಗ ಆರಂಭದಲ್ಲಿ ಸಂಖ್ಯೆಗಳನ್ನು ಒತ್ತಬೇಕಾಗುತ್ತದೆ. ನಂತರ ಸಾಮಾನ್ಯವಾಗಿ ನಮ್ಮ ಗ್ರಾಹಕ ಸೇವಾ ಸಿಬ್ಬಂದಿ ಮತ್ತೊಂದು ಕರೆಯಲ್ಲಿ ನಿರತವಾಗಿದ್ದಾರೆ ಎಂಬ ಮುದ್ರಿತ ಧ್ವನಿ ಕೇಳಿಸುತ್ತದೆ. ಬಳಿಕ ಸಾಕಷ್ಟು ಹೊತ್ತು ಸಂಗೀತ ಕೇಳಿಬರುತ್ತದೆ. ಇಷ್ಟೆಲ್ಲ ಮಾಡಲು ಕೃಷಿಕರಿಗೆ ಸಮಯಾವಕಾಶ ಇರುವುದಿಲ್ಲ. ಆದ್ದರಿಂದ ಅಗ್ರಿ ಅ್ಯಪ್ ನಿರ್ವಹಿಸುವ ಕ್ರಿಯಾಜೆನ್ ಕೇಂದ್ರ ಕಚೇರಿಯಲ್ಲಿ ಕೃಷಿಕರ ಕರೆಯನ್ನು ಕೂಡಲೇ ಸ್ವೀಕರಿಸುವಂಥ ವ್ಯವಸ್ಥೆ ಮಾಡಲಾಗಿದೆ.
ಪ್ರಾತ್ಯಕ್ಷಿಕೆ ವಿಡಿಯೋಗಳು:
ಅಗ್ರಿ ಅ್ಯಪ್ ತಂತ್ರಾಂಶದಲ್ಲಿ ಕೃಷಿಯ ವಿವಿಧ ವಿಷಯಗಳ ಬಗ್ಗೆ ವಿಡಿಯೋ ಪ್ರಾತ್ಯಕ್ಷಿಕೆ ಇದೆ. ನೀರು ನಿರ್ವಹಣೆ, ಪೋಷಕಾಂಶ ಒದಗಿಸಬೇಕಾದ ಪ್ರಮಾಣ, ಅಡಿಕೆ, ತೆಂಗು, ಕಬ್ಬು, ಭತ್ತ ಇತ್ಯಾದಿ ಅನೇಕ ಬೆಳೆಗಳನ್ನು ಚೆನ್ನಾಗಿ ಬೆಳೆದು ಉತ್ತಮ ಇಳುವರಿ ಪಡೆಯುವುದು ಹೇಗೆ ಎಂದು ತಿಳಿಸುವ ವಿಡಿಯೋಗಳಿವೆ. ಕುರಿ/ಮೇಕೆ/ಕೋಳಿ ಸಾಕಾಣಿಕೆ ಕುರಿತ ವಿಡಿಯೋಗಳು ಕೂಡ ಇವೆ. ಇವುಗಳನ್ನು ಕನ್ನಡ ಅಥವಾ ಹಿಂದಿ ಅಥವಾ ಇಂಗ್ಲೀಷ್ ಭಾಷೆ ಮುಖಾಂತರ ಅರಿಯಬಹುದು.
ದಾಖಲೀಕರಣ:
ಇಲ್ಲಿ ನಾಲ್ಕು ವಿಭಾಗಗಳಿವೆ. ಕೃಷಿಕ, ಪರಿಣಿತ, ಡೀಲರ್ ಉತ್ಸಾಹಿ/ಅತ್ಯಾಸಕ್ತಿ ಎಂದು ವಿಂಗಡಿಸಲಾಗಿದೆ. ಕೃಷಿಕರು ಕೃಷಿ ವಿಭಾಗದಲ್ಲಿ ತಮ್ಮ ಭಾವಚಿತ್ರವನ್ನು ಅಪ್ಲೋಡ್ ಮಾಡಬಹುದು. ತಮ್ಮ ಊರು, ಬೆಳೆಯುತ್ತಿರುವ ಅಥವಾ ಬೆಳೆಯಲು ಆಸಕ್ತಿ ಹೊಂದಿರುವ ಬೇರೆಬೇರೆ ಐದು ಬೆಳೆಗಳ ಬಗ್ಗೆ ತಿಳಿಸಬಹುದು.
ಡೀಲರ್ ವಿಭಾಗದಲ್ಲಿ ಪೋಷಕಾಂಶಗಳನ್ನು ಮಾರಾಟ ಮಾಡಲು ಆಸಕ್ತಿ ಹೊಂದಿರುವ ವ್ಯಕ್ತಿಗಳು ತಮ್ಮ ಭಾವಚಿತ್ರ ಅಪ್ಲೋಡ್ ಮಾಡುವುದರ ಜೊತೆಗೆ ಅಗತ್ಯ ವಿವರಗಳನ್ನು ನಮೂದಿಸಬಹುದು. ನಂತರ ಇವರು ತಮಗೆ ಮಾರಾಟಕ್ಕೆ ಅವಶ್ಯ ಇರುವಷ್ಟು ಪ್ರಮಾಣದ ಪೋಷಕಾಂಶಗಳನ್ನು ಇಂತಿಷ್ಟು ಕ್ವಿಂಟಾಲ್/ಟನ್ ಕಳಿಸಿಕೊಡುವಂತೆ ತಿಳಿಸಬಹುದು.
ಪರಿಣಿತ ವಿಭಾಗದಲ್ಲಿ ರೈತರಿಗೆ ಕೃಷಿ ವಿಷಯಗಳನ್ನು ತಿಳಿಸಲು ಆಸಕ್ತಿ ಹೊಂದಿರುವ ಪರಿಣಿತರು ತಮ್ಮ ಹೆಸರು, ಯಾವ ವಿಭಾಗದಲ್ಲಿ ಎಷ್ಟು ವರ್ಷ ಅನುಭವ ಇದೆ, ಯಾವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಅಥವಾ ನಿವೃತ್ತಿ ಹೊಂದಿದ್ದಾರೆಯೇ  ಎಂಬ ಕುರಿತು ತಿಳಿಸಬಹುದು.
ಉತ್ಸಾಹಿ/ ಅತ್ಯಾಸಕ್ತಿ ವಿಭಾಗದಲ್ಲಿ ಕೃಷಿ ಬಗ್ಗೆ ಆಸಕ್ತಿ ಇರುವ, ಕೃಷಿ ಹೊರತುಪಡಿಸಿ ಇತರ  ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ತಮ್ಮ ವಿವರಗಳನ್ನು ದಾಖಲಿಸಬಹುದು. ಮಾಧ್ಯಮ/ಮಾಹಿತಿ ತಂತ್ರಜ್ಞಾನ ಪರಿಣಿತರು ತಮ್ಮ ಸಲಹೆ-ಸೂಚನೆಗಳನ್ನು ನೀಡಬಹುದು.
ಸೆಟ್ಟಿಂಗ್ಸ್:
"ಮೊದಲೇ ತಿಳಿಸಿದಂತೆ ಇದು ಆಂಡ್ರಾಯ್ಡ್ ತಂತ್ರಾಂಶ ಆಧಾರಿತ ಸ್ಮಾರ್ಟ್ ಪೋನ್ ಮುಖಾಂತರ ಕಾರ್ಯ ನಿರ್ವಹಿಸುತ್ತದೆ. ವಿಂಡೋಸ್, ಐಪೋನ್ ತಂತ್ರಾಂಶ ಆಧಾರಿತ ಪೋನ್ ಮುಖಾಂತರವೂ ಕಾರ್ಯನಿರ್ವಹಿಸುವಂತೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ" ಎಂದು ಡಾ. ಆರ್. ಮಂಜುನಾಥ್ ತಿಳಿಸಿದರು.
ಫೀಚರ್ಸ್:
"ಕ್ರಿಯಾಜೆನ್ ಅಗ್ರಿ ಅ್ಯಪ್ ತಂತ್ರಾಂಶದಲ್ಲಿ ಬಹಳಷ್ಟು ಫೀಚರ್ಸ್ ಇವೆ. ಇದರ ಅನುಕೂಲ ಏನೆಂದರೆ ಗ್ರಾಹಕ ಸ್ನೇಹಿ ಆಗಿರುವುದು. ಮೊಬೈಲ್ನಲ್ಲಿ ಅ್ಯಪ್ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಂಡ ತಕ್ಷಣ ಲಾಗಿನ್ ಎಂದು ಕಂಡು ಬರುತ್ತದೆ. ಇದರಲ್ಲಿ ಬಳಕೆದಾರ ತನ್ನ ಹೆಸರು, ಮೊಬೈಲ್ ನಂಬರ್, ನಮೂದಿಸಿ ಭಾವಚಿತ್ರ ಅಪ್ಲೋಡ್ ಮಾಡಬೇಕು. ನಂತರ ಇದು ಒಂದು ಪ್ರೊಫೈಲ್ ಆಗಿ ಸೇವ್ ಆಗುತ್ತದೆ. ಇಲ್ಲಿಂದ ಅವರು ಅ್ಯಪ್ ಬಳಕೆಯಲ್ಲಿ ಮುಂದುವರಿಯಬಹುದು" ಎಂದು ಡಾ. ಆರ್. ಬಸವರಾಜ ಗಿರೆಣ್ಣವರ್ ವಿವರಿಸಿದರು.
ಹೋಮ್ ಸ್ಕ್ರೀನ್:
ಇದರಲ್ಲಿ ಪ್ಯಾಕೇಜ್ ಆಫ್ ಪ್ರಾಕ್ಟೀಸ್, ಚಾಟ್, ಕಾಲರ್, ವಿಡಿಯೋ, ನ್ಯೂಸ್, ಕ್ರಿಯಾಜೆನ್, ರಿಜಿಸ್ಟೇಶನ್, ಆರ್ಡರ್, ಸೆಟ್ಟಿಂಗ್ಸ್ ಎಂದು ಒಂಭತ್ತು ವಿಭಾಗಗಳಿರುತ್ತವೆ. ಮೊದಲನೇಯದಾದ ಪ್ಯಾಕೇಜ್ ಆಫ್ ಪ್ರಾಕ್ಟೀಸ್ ವಿಭಾಗದಲ್ಲಿ ಬೆಳೆಗಾರರು ತಮಗೆ ಬೇಕಾದ ಬೆಳೆ ಬಗ್ಗೆ ತಿಳಿದುಕೊಳ್ಳಬಹುದು. ಇಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ವಿವಿಧ ಬೆಳೆಗಳ ಚಿತ್ರಗಳನ್ನು, ಅವುಗಳ ಹೆಸರುಗಳನ್ನು ನೀಡಲಾಗಿರುತ್ತದೆ. ಆಸಕ್ತಿ ಇರುವ ಬೆಳೆಯ ಚಿತ್ರ ಮುಟ್ಟಿದರೆ ಅದರಲ್ಲಿ ಅಡಕವಾಗಿರುವ ವಿವರಗಳು ತೆರೆದುಕೊಳ್ಳುತ್ತವೆ. ಇವುಗಳು ಪಿಡಿಎಫ್ ಆವೃತ್ತಿಯಲ್ಲಿದ್ದು ಡೌನ್ಲೋಡ್ ಮಾಡಿಕೊಳ್ಳಲು ಸುಲಭವಾಗಿರುತ್ತದೆ.
ಕೃಷಿಕ ಆಯ್ಕೆ ಮಾಡಿದ ಬೆಳೆಯಲ್ಲಿ ಯಾವ ಯಾವ ತಳಿಗಳು ಲಭ್ಯ ಇವೆ. ಎಂಥ ವಾತಾವರಣದಲ್ಲಿ ಅದು ಚೆನ್ನಾಗಿ ಬೆಳೆಯುತ್ತದೆ. ಬಿತ್ತನೆ/ನಾಟಿ ಸಂದರ್ಭದಲ್ಲಿ ಯಾವ ಕ್ರಮಗಳನ್ನು ಅನುಸರಿಸಬೇಕು, ಅದಕ್ಕೆ ಯಾವ ರೀತಿಯ ರೋಗ ಕೀಟ (ಸಂಬಂಧಿಸಿದ ಕೀಟಗಳ ಚಿತ್ರಗಳನ್ನು ನೀಡಲಾಗಿರುತ್ತದೆ) ಬಾಧಿಸಬಹುದಾದ ಸಾಧ್ಯತೆ ಇರುತ್ತದೆ. ಇಂಥ ತೊಂದರೆ ಉಂಟಾಗದಿರಲು ಮುಂಜಾಗ್ರತೆಯಾಗಿ ಯಾವ ಕ್ರಮ ಕೈಗೊಳ್ಳಬೇಕು, ಯಾವ ರೀತಿಯ ಪೋಷಕಾಂಶಗಳನ್ನು ಹಾಕಬೇಕು, ಯಾವ ಪ್ರಮಾಣದಲ್ಲಿ ನೀಡಿದರೆ ಅನುಕೂಲ ಇತ್ಯಾದಿ ವಿವರಗಳು ಇರುತ್ತವೆ.
ಚಾಟ್ ವಿಭಾಗದ ವಿಶೇಷತೆ ಏನೆಂದರೆ ಚಿತ್ರ/ವಿಡಿಯೋ ತೆಗೆಯಲು ಗೊತ್ತಾಗುತ್ತಿಲ್ಲ ಅಥವಾ ಚಾಟ್ ಮಾಡಲು ತಿಳಿದಿಲ್ಲದಿದ್ದರೆ ಅವರು ತಮಗೆ ಪರಿಹಾರ ಬೇಕಿರುವ ಸಮಸ್ಯೆ ಬಗ್ಗೆ ಹೇಳಿದರೆ ಅದು ರೆಕಾರ್ಡ್ ಆಗುತ್ತದೆ. ನಂತರ ಸೆಂಡ್ ಬಟನ್ ಒತ್ತಿದರೆ ಅದು ಅ್ಯಪ್ ನಿರ್ವಹಣಾ ಕೇಂದ್ರಕ್ಕೆ ತಲುಪುತ್ತದೆ.
ನ್ಯೂಸ್ ವಿಭಾಗಕ್ಕೆ ಬಂದರೆ ಅವರು ಕೃಷಿರಂಗಕ್ಕೆ ಸಂಬಂಧಿಸಿ ನೂತನ ಮಾಹಿತಿಗಳನ್ನು ಪಡೆಯಬಹುದು. ಕೃಷಿ ಯೋಜನೆಗಳು, ಸೌಲಭ್ಯಗಳು, ನೀತಿ-ನಿರೂಪಣೆಗಳ ಬಗ್ಗೆ ತಿಳಿಯಬಹುದು. ವಿಭಾಗವನ್ನು ಪ್ರತಿದಿನವೂ ಅಪ್ಡೇಟ್ ಮಾಡಲಾಗುತ್ತದೆ. ಇದು ಕೃಷಿ ಮಾಹಿತಿ ಕಣಜದಂತೆ ಕಾರ್ಯನಿರ್ವಹಿಸುತ್ತದೆ.
ಕ್ರಿಯಾಜೆನ್ ವಿಭಾಗ:
ವಿಭಾಗಕ್ಕೆ ಬಂದರೆ ಕ್ರಿಯಾಜೆನ್ ಎಂದರೆ ಏನು. ಸಂಸ್ಥೆ ಏನೇನು ಕೆಲಸ-ಕಾರ್ಯಗಳನ್ನು ಮಾಡುತ್ತಿದೆ. ಜೊತೆಗೆ ಸಂಸ್ಥೆಯು ತಯಾರಿಸುತ್ತಿರುವ ಕೃಷಿ ಒಳಸುರಿಗಳ ಬಗ್ಗೆಯೂ ಚಿತ್ರ ಸಹಿತ ಮಾಹಿತಿ ಇರುತ್ತದೆ. ಇವೆಲ್ಲದರ ಮುಖಾಂತರ ಕ್ರಿಯಾಜೆನ್ ಬಗ್ಗೆ ರೈತರು ಹೆಚ್ಚು ತಿಳಿದುಕೊಳ್ಳುತ್ತಾರೆ. ಇದರಿಂದ ಸಂಸ್ಥೆ ಮತ್ತು ಕೃಷಿಕರ ನಡುವಿನ ಬಾಂಧವ್ಯ ಸುಮಧುರವಾಗಿರಲು ಸಹಾಯವಾಗುತ್ತದೆ.
ಕ್ಷೇತ್ರಸೇವೆ:
ಸಂಸ್ಥೆಯಲ್ಲಿ ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡುವ ಕ್ಷೇತ್ರ ನಿರ್ವಾಹಕರು ಇರುತ್ತಾರೆ. ಸ್ಮಾರ್ಟ್ ಪೋನ್ ಹೊಂದಿಲ್ಲದ ರೈತರು ಸಂಸ್ಥೆಗೆ ಅಥವಾ ಕ್ಷೇತ್ರ ನಿರ್ವಾಹಕರಿಗೆ ಕರೆ ಮಾಡಿದರೆ ಇವರು ತಮ್ಮ ಬಳಿ ಇರುವ ಸ್ಮಾರ್ಟ್ ಪೋನ್/ ಟ್ಯಾಬ್ಲೆಟ್ ಸಮೇತ ತೆರಳುತ್ತಾರೆ. ಅಲ್ಲಿ ರೈತನ ಸಮಸ್ಯೆ ಏನೆಂದು ಕೇಳಿ ಹೊಲ/ಬೆಳೆ/ಕೀಟ ಇತ್ಯಾದಿ ವಿವರಗಳ ಚಿತ್ರ/ವಿಡಿಯೋ ತೆಗೆದುಕೊಂಡು ಕೇಂದ್ರ ಸ್ಥಾನಕ್ಕೆ ಕಳಿಯಿಸುತ್ತಾರೆ. ಬಳಿಕ ಪರಿಣಿತರು ಅವುಗಳಿಗೆ ಸೂಕ್ತ ಪರಿಹಾರ ಸೂಚಿಸುತ್ತಾರೆ.
ಉಚಿತ:
"ಕ್ರಿಯಾಜೆನ್ ಅಗ್ರಿ ಅ್ಯಪ್ ತಂತ್ರಾಂಶ ಬಳಸಲು ಯಾವುದೇ ಶುಲ್ಕ ಇರುವುದಿಲ್ಲ. ಸ್ಮಾರ್ಟ್ ಪೋನ್ ಹೊಂದಿರುವ ರೈತರು ಇದನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಂಡು ಬಳಸಬಹುದು. ಜೊತೆಗೆ ಪರಿಣಿತರ ಸೇವೆಗೂ ಕೂಡ ಸಂಸ್ಥೆ ಶುಲ್ಕ ತೆಗೆದುಕೊಳ್ಳುವುದಿಲ್ಲ. ಕೃಷಿಕರು ತನ್ಮೂಲಕ ರಾಜ್ಯ/ರಾಷ್ಟ್ರದ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ" ಎಂದು ಡಾ. ಆರ್. ಬಸವರಾಜ್ ಗಿರೆಣ್ಣವರ್ ತಿಳಿಸಿದರು.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ಡಾ. ಬಸವರಾಜ್ ಗಿರೆಣ್ಣವರ್
ಮೊ: 97414 14048
ಡಾ. ಆರ್. ಮಂಜುನಾಥ್
ಮೊ: 94480 291450

ವಿಡಿಯೋ