ಕೃಷಿಕರ ಸೆಳೆದ ಕೃಷಿಮೇಳ

2010 ನವೆಂಬರ್ 11ರಿಂದ 14ರವರೆಗೆ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಮೇಳ ನಡೆಯಿತು. ಬಾರಿ ಬೆಂಗಳೂರು ಕೃಷಿವಿದ್ಯಾಲಯ ಮೇಳವನ್ನು ಅತ್ಯಂತ ವ್ಯವಸ್ಥಿತವಾಗಿ ಯೋಜಿಸಿದ್ದು ಗಮನಾರ್ಹ. ಮಳಿಗೆಗಳ ವ್ಯವಸ್ಥಾಪನೆ, ಕೃಷಿಕರ ಗಮನ ಸೆಳೆಯುವಿಕೆ ಹಿಂದಿನ ವರ್ಷಗಳಿಗಿತಲೂ ಅಚ್ಚುಕಟ್ಟು. ನಾಲ್ಕು ದಿನದ ಅವಧಿಯಲ್ಲಿ ಒಟ್ಟು ನಾಲ್ಕು ಲಕ್ಷ ಜನ ಭಾಗವಹಿದ್ದಾರೆಂಬ ಅಂದಾಜು.
  
ಪ್ರಾತ್ಯಕ್ಷಿಕೆ ತಾಕುಗಳ ಸನಿಹದಲ್ಲಿಯೇ ಮಳಿಗೆಗಳಿದ್ದವು. ಇದರಿಂದ ರೈತರು-ಆಸಕ್ತರು ಹೆಚ್ಚುದೂರ ನಡೆಯುವ ಪ್ರಮೇಯವಿರಲಿಲ್ಲ. ಮಳಿಗೆಗಳ ಮಧ್ಯದಲ್ಲಿಯೇ ಸಭಾಂಗಣವಿದ್ದರಿಂದ ಪ್ರೇಕ್ಷಕರ ಕೊರತೆಯಿರಲಿಲ್ಲ. ಸಾವಯವ ಕೃಷಿ ಬಗ್ಗೆ ಆದ್ಯತೆ ನೀಡಲಾಗಿತ್ತು. ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಂದ ಉಪನ್ಯಾಸಗಳನ್ನು ಏರ್ಪಡಿಸಿದ್ದರಿಂದ ಹೆಚ್ಚು ಪ್ರಯೋಜನವಾಯಿತು. ಇಂಥ ಉಪನ್ಯಾಗಳ ಸಂದರ್ಭದಲ್ಲಿ ರೈತರು ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ-ಸಂವಾದದಲ್ಲಿ ತೊಡಗಿಸಿಕೊಂಡಿದ್ದು ಅವರ ಆಸಕ್ತಿಯನ್ನು ವ್ಯಕ್ತಪಡಿಸುತ್ತಿತ್ತು.

ಹೊಸತಳಿ: ಕೃಷಿಮೇಳದ ಸಂದರ್ಭದಲ್ಲಿ ಹೊಸತಳಿಗಳನ್ನು ಬಿಡುಗಡೆ ಮಾಡಲಾಯಿತು. ಕಡಿಮೆ ಅವಧಿಯ ಭತ್ತದ ತಳಿ ಕೆಎಂಪಿ-105, ಅಧಿಕ ಇಳುವರಿಯೊಂದಿಗೆ ಜಾನುವಾರುಗಳಿಗೂ ಅಧಿಕ ಮೇವು ಒದಗಿಸುವ ಮುಸುಕಿನ ಜೋಳದ ಸಂಕರಣ ತಳಿ- ಎನ್..ಹೆಚ್ 1137(ಹೇಮ), ಹೆಚ್ಚು ಇಳುವರಿ ನೀಡುವ ಶೇಂಗಾ ತಳಿ ಕೆ.ಸಿ.ಜಿ, ಸೋಯಾ ಅವರೆ ತಳಿ ಎಂ..ಯು.ಎಸ್(ಪೂಜಾ), ಅಲಸಂದೆ ತಳಿ ಪಿ.ಕೆ.ಬಿ-4 ಲೋಕಾರ್ಪಣೆಯಾದವು. ಇದೇ ಸಂದರ್ಭದಲ್ಲಿ ಸಮೃದ್ದ ಇಳುವರಿ ನೀಡುವ ಸೂರ್ಯಕಾಂತಿ ತಳಿಗಳ ಪ್ರದರ್ಶನವಿತ್ತು

ಸಾವಯವ ಕೃಷಿ:
ಮೇಳದಲ್ಲಿ ಸಾವಯವ ಕೃಷಿ ವಿಭಾಗ ಭಾಗವಹಿಸಿದವರ ಗಮನ ಸೆಳೆಯಿತು. ರಾಜ್ಯದ ವಿವಿಧ ಭಾಗಗಳಲ್ಲಿ ಸಾವಯವ ಗ್ರಾಮ ಯೋಜನೆಯಲ್ಲಿ ತೊಡಗಿಸಿಕೊಂಡ ಸ್ವಯಂ ಸೇವಾ ಸಂಸ್ಥೆಗಳು ತಮ್ಮ ಸಾಧನೆ ತೋರಿಸುವ ಅಂಶಗಳನ್ನು ಮಳಿಗೆಗಳಲ್ಲಿಟ್ಟಿದ್ದರು. ಕೃಷಿಕರ ಸಾಧನೆ ವಿವರಿಸುವ ಪುಸ್ತಕಗಳು, ನಾಟಿ ತಳಿಯ ಬಿತ್ತನೆ ಬೀಜಗಳು, ರೈತ ಮಹಿಳೆಯರೇ ತಯಾರಿಸಿದ ಮೌಲ್ಯಧಾರಿತ ಕೃಷಿ ಉತ್ಪನ್ನಗಳು ಅಲ್ಲಿದ್ದವು.

ಜಾನುವಾರು ಪ್ರದರ್ಶನ:
ಇದಕ್ಕಾಗಿಯೂ ಪ್ರತ್ಯೇಕ ವಿಭಾಗವಿತ್ತು. ವಿದೇಶಿ ತಳಿ ಕುರಿಗಳು, ಎಮು ಪಕ್ಷಿಗಳು, ಮಿಶ್ರ ತಳಿಯ ಕೋಳಿಗಳು, ಜವಾರಿ ಎತ್ತುಗಳು ಗಮನ ಸೆಳೆದವು. ನಾಟಿ ಎತ್ತು-ಹಸುಗಳನ್ನು ಬಹಳ ಚೆನ್ನಾಗಿ ಸಾಕಿದ ಕೃಷಿಕರು ಅವುಗಳನ್ನು ಸಾಕಿದ ಮತ್ತು ಸಾಕುವ ರೀತಿಯನ್ನು ಆಸಕ್ತರಿಗೆ ವಿವರಿಸುತ್ತಿದ್ದರು. ಹೆಚ್ಚು ತೂಕವಿರುವ ಕುರಿಗಳನ್ನು ನೋಡಿ ಇದು ಯಾವ ತಳಿ ಎಂದು ವಿಚಾರಿಸುತ್ತಿದದ್ದು ಸಾಮಾನ್ಯವಾಗಿತ್ತು. ಎಮು ಪಕ್ಷಿಯ ಮೊಟ್ಟೆ ಗಾತ್ರ ನೋಡಿ ಮತ್ತು ಅದರ ಬೆಲೆ ಕೇಳಿ ಜನ ಆಶ್ಚರ್ಯಪಡುತ್ತಿದ್ದರು. ಒಂದು ಮೊಟ್ಟೆಗೆ ಒಂದು ಸಾವಿರ ರೂಪಾಯಿ ನೀಡುವುದಕ್ಕೆ ಆಗುತ್ತದೆಯೇ, ಮೊಟ್ಟೆಯನ್ನು ಯಾವುದಕ್ಕೆ ಬಳಸುತ್ತಾರೆ ಎಂಬ ಪ್ರಶ್ನೆಗಳು ಸಾಕಾಣಿಕೆದಾರರಿಗೆ ಸಾಮಾನ್ಯವಾಗಿತ್ತು. ಎಮು ಹಕ್ಕಿಯ ಬಗ್ಗೆ ಸಾಧ್ಯವಿರುವಷ್ಟು ಮಾಹಿತಿಯನ್ನು ಕೃಷಿಕರು-ಕೃಷಿಯೇತರ ಉದ್ಯೋಗದ ಮಂದಿ ಆಸಕ್ತಿಯಿಂದ ಕಲೆ ಹಾಕುತ್ತಿದ್ದರು.

ಬಾರಿ ಕೃಷಿಮೇಳದಲ್ಲಿ 540 ಮಳಿಗೆಗಳಿದ್ದವು. ಮೇಳ ಪ್ರಾರಂಭವಾದ ಎರಡನೇ ದಿನ ಅನೇಕ ಉದ್ಯಮಿಗಳು ಮಳಿಗೆಗಾಗಿ ಮತ್ತು ಈಗಾಗಲೇ ಮಳಿಗೆ ಹಾಕಿದವರು ಹೆಚ್ಚುವರಿ ಮಳಿಗೆಗಳಿಗಾಗಿ ಸಂಘಟಕರಿಗೆ ಒತ್ತಾಯ ಮಾಡುತ್ತಿದ್ದ ದೃಶ್ಯವೂ ಕಂಡುಬಂತು. ಇದಕ್ಕೆ ಕಾರಣ ಬಹುತೇಕ ಎಲ್ಲ ಮಳಿಗೆಗಳಲ್ಲಿಯೂ ನಿರೀಕ್ಷೆಗೂ ಮೀರಿ ಕೃಷಿಕರ ಪ್ರತಿಕ್ರಿಯೆ ಕಂಡು ಬಂದಿದ್ದೇ ಆಗಿತ್ತು. ಕೃಷಿಗೆ ಸಂಬಂಧಿಸಿದ ಇಲಾಖೆಗಳೆಲ್ಲವೂ ತಮ್ಮ ಮಳಿಗೆಗಳನ್ನು ತೆರೆದಿದ್ದವು. ತಮ್ಮ ಇಲಾಖೆಯಿಂದ ಕೃಷಿಕರಿಗೆ ದೊರೆಯುವ ವಿವಿಧ ರೀತಿಯ ಸೌಲಭ್ಯಗಳ ನೀಡುವಿಕೆ-ಅವುಗಳನ್ನು ಪಡೆಯಲು ಅನುಸರಿಸಬೇಕಾದ ಕ್ರಮ ವಿವರಿಸುವ ಕರಪತ್ರಗಳನ್ನು ಹಂಚಿದ್ದು ಮಾಹಿತಿ ಪಡೆಯುವವರಿಗೆ ಅನುಕೂಲಕರವಾಗಿತ್ತು

ಜೈವಿಕ ಇಂಧನ: ಈಗಾಗಲೇ ಜೈವಿಕ ಇಂಧನಕ್ಕೆ ಇರುವ ಬೇಡಿಕೆ ಮತ್ತು ಮುಂದಿನ ದಿನಗಳಲ್ಲಿ ಜೈವಿಕ ಇಂಧನಕ್ಕೆ ಬರುವ ಅಪಾರ ಬೇಡಿಕೆ, ಜೈವಿಕ ಇಂಧನ ಸಸ್ಯಗಳ ಕೃಷಿಪರಿಚಯ, ಬೀಜಗಳ ಸಂಗ್ರಹಣೆ, ತೈಲ ಉತ್ಪಾದಿಸುವ ರೀತಿ ಪರಿಚಯಿಸುವ ಪ್ರಾತ್ಯಕ್ಷಿಕೆ ನೀಡುವ ಮಳಿಗೆಯಿತ್ತು. ಕೃಷಿವಿಶ್ವವಿದ್ಯಾಲಯದವರೇ ಮಳಿಗೆ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಇದಲ್ಲದೇ ಬೆಂಗಳೂರು ಕೃಷಿ ವಿವಿ ವ್ಯಾಪ್ತಿಯ 17 ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಇರುವ ಕೃಷಿ ಸಂಶೋಧನಾ ಕೇಂದ್ರಗಳು, ಕೃಷಿ ವಿಜ್ಞಾನ ಕೇಂದ್ರಗಳವರು ತಮ್ಮ ಸಾಧನೆಗಳನ್ನು ವಿವರಿಸುವ ಮಳಿಗೆಗಳಿದ್ದವು. ಭತ್ತದಲ್ಲಿ ಅನೇಕ ರೀತಿಯ ನಾಟಿ ಭತ್ತದ ಪೈರುಗಳು, ಬಿತ್ತನೆ ಬೀಜಗಳ ಪ್ರದರ್ಶನವನ್ನು ಶಿವಮೊಗ್ಗದ ನವಿಲೆ ಕೃಷಿಕೇಂದ್ರದವರು ಏರ್ಪಡಿಸಿದ್ದರು. ಸಾವಯವ ಕೃಷಿವಿಭಾಗದಲ್ಲಿದ್ದ ಮಳಿಗೆ ರೈತರ ಗಮನ ಸೆಳೆಯವಲ್ಲಿ ಯಶಸ್ವಿಯಾಯಿತು. ದೊಡ್ಡದೊಡ್ಡ ಕುಂಡಗಳಲ್ಲಿ ವಿವಿಧ ರೀತಿಯ ನಾಟಿ ಭತ್ತದ ತಳಿಗಳನ್ನು ಬೆಳೆಸಿ ಅದರ ತಳಿ ಯಾವುದು ಎಂದು ತಿಳಿಸುವ ಫಲಕಗಳನ್ನು ಹಾಕಲಾಗಿತ್ತು. ಆಕರ್ಷಕವಾದ ಸಣ್ಣ ಸಣ್ಣ ಕೆಂಪನೆಯ ಮಣ್ಣಿನ ತಟ್ಟೆಗಳಲ್ಲಿ ಬಗೆಬಗೆಯ ನಾಟಿ ಭತ್ತದ ಬೀಜಗಳನ್ನು ಇಟ್ಟು ಅವುಗಳ ಮುಂದೆ ಹೆಸರುಗಳ ಫಲಕಗಳನ್ನು ಇಟ್ಟಿದ್ದು  ಪ್ರಶಂಸೆಗೆ ಪಾತ್ರವಾಯಿತು

ರಾಗಿ:
ಬೆಂಗಳೂರು ಕೃಷಿ ವಿವಿ ವ್ಯಾಪ್ತಿಯಲ್ಲಿ ರಾಗಿ ಬೆಳೆಯುವ ರೈತರ ಸಂಖ್ಯೆ ಹೆಚ್ಚು. ಇಂಥ ರೈತರು ವಿವಿ ಅಭಿವೃದ್ದಿಪಡಿಸಿದ ರೋಗನಿರೋಧಕ ರಾಗಿ ತಳಿ ಜಿ.ಪಿಯು-28 ಬಗ್ಗೆ ಹೆಚ್ಚು ಕಾಳಜಿಯಿಂದ ವಿಚಾರಿಸಿ ಮಾಹಿತಿ ಪಡೆಯುತ್ತಿದ್ದರು
   
ಕೃಷಿಪತ್ರಿಕೆ:
ಕನ್ನಡದಲ್ಲಿ ಪ್ರಕಟಣೆಯಾಗುವ ಎಲ್ಲ ಕೃಷಿಪತ್ರಿಕೆಗಳ ಮಳಿಗೆಗಳೂ ಇದ್ದವು. ಆಸಕ್ತರು ಇವುಗಳ ಸಂಚಿಕೆಗಳನ್ನು ಆಸಕ್ತಿಯಿಂದ ತಿರುವಿಹಾಕುತ್ತಿದ್ದರು. ಇಂಥವರಲ್ಲಿ ಅನೇಕರು ಚಂದಾದಾರರೂ ಆಗುತ್ತಿದ್ದರು. ರಾಜ್ಯದ ಪ್ರಮುಖ ದಿನಪತ್ರಿಕೆಗಳೂ ತಮ್ಮ ಮಳಿಗೆಗಳನ್ನು ಹಾಕಿದ್ದರು. ಇಲ್ಲಿ ತಮ್ಮ ದಿನಪತ್ರಿಕೆಗಳನ್ನು ಉಚಿತವಾಗಿ ವಿತರಿಸುತ್ತಿದದ್ದು ಗಮನ ಸೆಳೆಯಿತು
  
ಯಂತ್ರೋಪಕರಣ:
ಇತ್ತೀಚಿನ ವರ್ಷಗಳಲ್ಲಿ ಕೃಷಿರಂಗ ಕೃಷಿಕಾಮರ್ಿಕರ ಅಭಾವ ಎದುರಿಸುತ್ತಿದೆ. ಸಮಸ್ಯೆ ನಿವಾರಿವ ನಿಟ್ಟಿನಲ್ಲಿ ಸಹಕರಿಸುವ ವಿವಿಧ ಬಗೆಯ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯೂ ಇತ್ತು. ಹೊಸದಾಗಿ ಮಾರುಕಟ್ಟೆಗೆ ಪರಿಚಿತವಾದ ಯಂತ್ರೋಪಕರಣಗಳೂ ಕಂಡುಬಂದವು. ಅಚ್ಚುಕಟ್ಟಾಗಿ ಭತ್ತದ ಸಸಿಗಳನ್ನು ನಾಟಿ ಮಾಡುವ ಯಂತ್ರ, ತೆಂಗಿನಕಾಯಿ ಕೊಯ್ಯುವ ಯಂತ್ರ, ಎತ್ತುಗಳನ್ನು ಮೂಲಕ ಸರಕು ಸಾಗಾಣಿಕೆಗೆ ಅನುಕೂಲಕರವಾದ ಮಾದರಿಗಳು ಗಮನ ಸೆಳೆದವು.

No comments:

Post a Comment

ವಿಡಿಯೋ