ಭಾರತೀಯ ಕೃಷಿರಂಗದ ಜ್ವಲಂತ
ಸಮಸ್ಯೆ; ಕೃಷಿಕಾರ್ಮಿಕರ ಕೊರತೆ. ಇದರಿಂದ ಅನೇಕರು
ಕೃಷಿಯಿಂದ ವಿಮುಖರಾಗಿದ್ದಾರೆ. ಇಂಥವರ ಸಂಖ್ಯೆ
ಬೆಳೆಯುತ್ತಲೇ ಇದೆ. ಪರಿಹಾರದ
ಅಗತ್ಯವಿದೆ. ಈ ನಿಟ್ಟಿನಲ್ಲಿ 'ಅಗ್ರಿಮಾರ್ಟ್' ಸ್ಥಾಪಿತವಾಗಿದೆ. ದೇಶಾದ್ಯಂತ
ಇದರ ವ್ಯವಸ್ಥಿತ ಶಾಖಾ
ಜಾಲವಿದೆ.
'ರೈತರಿಗೆ ಅಗತ್ಯವಾಗಿರುವ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಯನ್ನು ಅವರ ಸ್ಥಳದಲ್ಲಿಯೇ ಮಾಡಲಾಗುತ್ತಿದೆ. ಇದಲ್ಲದೇ ರಾಜ್ಯ ಮತ್ತು ದೇಶದ ಇತರ ರಾಜ್ಯಗಳಲ್ಲಿ 'ಅಗ್ರಿಮಾರ್ಟ್' ಶಾಖೆಗಳಿವೆ. ಇಲ್ಲಿ ಎಲ್ಲ ಬಗೆಯ ಕೃಷಿಯಂತ್ರೋಪಕರಣಗಳ ಪ್ರದರ್ಶನವಿದೆ. ಜೊತೆಗೆ ಇಲ್ಲಿಗೆ ಭೇಟಿ ನೀಡಿದ ರೈತರಿಗೆ ಈ ಯಂತ್ರಗಳ ಕಾರ್ಯರೀತಿಯ ಬಗ್ಗೆ ಇರುವ ವಿಡಿಯೋ ಪ್ರದರ್ಶಿಸಲಾಗುತ್ತದೆ. ಹೀಗೆ ಮಾಡುವುದರಿಂದ ನಮ್ಮ ಸಂಸ್ಥೆಯಲ್ಲಿನ ಯಂತ್ರೋಪಕರಣಗಳಿಂದ ಕೃಷಿಕಾರ್ಮಿಕರ ಕೊರತೆಗೆ ಪರಿಹಾರವಿರುವುದು ತಿಳಿಯುತ್ತದೆ. 'ಅಗ್ರಿಮಾರ್ಟ್ ನಿಂದ' ನಿಂದ ಸುಸ್ಥಿರ-ಸ್ವಾವಲಂಬಿ ಕೃಷಿ ನಡೆಸುವುಕ್ಕೆ ಅನುಕೂಲವಾಗಿದೆ ಎಂಬ ಅಭಿಪ್ರಾಯವನ್ನು ಕೃಷಿಕರು ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯವಾಗಿ ಅಗ್ರಿಮಾರ್ಟ್ ನಲ್ಲಿ ಕೃಷಿಕಾರ್ಮಿಕರ ಕೊರತೆ ನೀಗುವ ಯಂತ್ರೋಪಕರಣಗಳು ಲಭ್ಯವಾಗುತ್ತಿವೆ. ಇವುಗಳು ಏಕಕಾಲದಲ್ಲಿ ಕೃಷಿಕಾರ್ಮಿಕರ ಕೊರತೆ ನಿವಾರಿಸುವುದರ ಜೊತೆಗೆ ಸಮಯ, ಹಣ, ಅಚ್ಚುಕಟ್ಟಾದ ಕೆಲಸ ಆಗುವುದಕ್ಕೆ ಕಾರಣವಾಗುತ್ತಿವೆ'
ಎನ್ನುತ್ತಾರೆ ಅಗ್ರಿಮಾರ್ಟ್ ವ್ಯವಸ್ಥಾಪಕ ನಿದೇರ್ಶಕ ವಾಸುದೇವಮೂರ್ತಿ.
ಇದಕ್ಕೆ ವಾಸುದೇವಮೂರ್ತಿ ಅವರು ನಿರ್ದಿಷ್ಟ ಉದಾಹರಣೆಗಳನ್ನು ನೀಡುತ್ತಾರೆ. ಓಲಿಯೋಮ್ಯಾಕ್ ಕಳೆ ಕೊಚ್ಚುವ ಯಂತ್ರ ಇಂಥ ಪರಿಣಾಮ ಉಂಟು ಮಾಡುವ ಉಪಕರಣಗಳಲ್ಲಿ ಸಾಲಿನಲ್ಲಿದೆ. ಒಂದು ಎಕರೆ ಅಡಿಕೆ ತೋಟದಲ್ಲಿ ಬೆಳೆದ ಕಳೆ ತೆಗೆಯಲು 18-20 ಮಂದಿ ಕೃಷಿಕಾರ್ಮಿಕರ ಅಗತ್ಯವಿದೆ. ಆದರೆ ಓರ್ವ ಕೃಷಿಕ ಓಲಿಯೋಮ್ಯಾಕ್ ಬಳಸಿ ಒಂದೇ ದಿನದಲ್ಲಿ ಎರಡು ಎಕರೆ ಕಳೆ ತೆಗೆಯಬಹುದು. ಇದರಿಂದ ಒಂದು ಎಕರೆಗೆ ಒಂದೂವರೆ ಸಾವಿರ ರೂಪಾಯಿಗಳವರೆಗೂ ಉಳಿತಾಯವಾಗುತ್ತದೆ. ಸಮಯ-ಶ್ರಮ ಉಳಿತಾಯವಾಗುವುದೂ ಗಮನಾರ್ಹ. ಒಂದು ವರ್ಷದಲ್ಲಿ ಕನಿಷ್ಠ ಎರಡು-ಮೂರು ಬಾರಿಯಾದರೂ ಕಳೆ ತೆಗೆಯಬೇಕಾಗಿರುತ್ತದೆ. ಓಲಿಯೋಮ್ಯಾಕ್ ಬಳಸಿದಾಗ ಉಳಿತಾಯವಾಗುವ ಹಣದ ಪ್ರಮಾಣ ಇದರಿಂದ ತಿಳಿಯುತ್ತದೆ. ಇದೇ ರೀತಿ ಅಗ್ರಿಮಾರ್ಟ್ ಮುಖಾಂತರ ದೊರೆಯುವ ಅಗ್ರಿಮೆಟ್ ಸ್ಪ್ರೇಯರ್ ಉಪಯೋಗ. ಓರ್ವ ವ್ಯಕ್ತಿ ಕೈ ಪಂಪ್ ಬಳಸಿದಾಗ ಒಂದು ದಿನದಲ್ಲಿ ಒಂದು ಎಕರೆಗೆ ಸಿಂಪಡಣೆ ಮಾಡುವುದು ಕಷ್ಟ. ಪುಟ್ಟ ಎಂಜಿನ್ ಅಳವಡಿಸಿದ ಅಗ್ರಿಮೆಟ್ ಸ್ಪ್ರೇಯರ್ ಬಳಸಿದಾಗ ಒಂದೇ ದಿನದಲ್ಲಿ 8-15 ಎಕರೆಗೆ ಸ್ಪ್ರೇಯಿಂಗ್ ಮಾಡುವುದು ಸಾಧ್ಯ. ಒಂದು ಎಂಜಿನ್ ಅಪರೇಟೇಡ್ ಸ್ಪ್ರೇಯರ್ , ಎಂಟು ಮ್ಯಾನುವಲ್ ಸ್ಪ್ರೇಯರ್ಗೆ ಸಮ. ಇಂಥ ಅನೇಕ ಉದಾಹರಣೆಗಳನ್ನು 'ಅಗ್ರಿಮಾರ್ಟ್' ನಲ್ಲಿ ದೊರೆಯುವ ವಿವಿಧ ರೀತಿಯ ಕೃಷಿ ಉಪಕರಣಗಳ ಬಗ್ಗೆ ಹೇಳಬಹುದು
ಅಗ್ರಿಮಾರ್ಟ್ ನಲ್ಲಿ ವಿವಿಧ ರೀತಿಯ ತೋಟಗಳಿಗೆ ಅನುಕೂಲವಾದ ಯಂತ್ರೋಪಕರಣಗಳು ದೊರೆಯುವುದು ವಿಶೇಷ. ಕಾಫಿ, ತೆಂಗು, ಕೊಕ್ಕೊ, ವಿವಿಧ ರೀತಿ ಹಣ್ಣಿನ ಬೆಳೆಗಳ ತೋಟಗಳು, ತೇಗ, ಶ್ರೀಗಂಧದಂಥ ರೇಷ್ಮೆ ಪ್ಲಾಟೇಷನ್ಗಳಿಗೆ ಅನುಕೂಲಕರ ಉಪಕರಣಗಳು ಲಭ್ಯವಿದೆ. ಅರಣ್ಯೀಕರಣ ಮಾಡುವುದಕ್ಕೆ ಅಗತ್ಯವಾದ ಯಂತ್ರೋಪಕರಣಗಳೂ ಲಭ್ಯ. ಹಣ್ಣಿನ ತೋಟಗಳ ಬಗ್ಗೆ ಹೇಳುವುದಾದರೆ ಇಲ್ಲಿನ ಮರಗಳ ಕೆಳಗೆ ಮತ್ತು ಸಮೀಪದಲ್ಲಿ ಅಗೆತ ಮಾಡುವುದಕ್ಕೆ, ಅಂತರ ಬೆಳೆ ಬೆಳೆಯುವುದಕ್ಕೆ ರೆಂಬೆ-ಕೊಂಬೆಗಳು ಅಡ್ಡಿ. ಇಲ್ಲಿ ಟ್ರಾಕ್ಟರ್ನಿಂದಾಗಲಿ ಎತ್ತುಗಳನ್ನು ಬಳಸಿ ಉಳುಮೆ ಮಾಡುವುದಾಗಲಿ ಸಾಧ್ಯವಿಲ್ಲ. ಇಂಥಲ್ಲಿ ಅಗ್ರಿಮಾರ್ಟ್ ನಲ್ಲಿ ದೊರೆಯುವ ರೋಟರಿ ಟಿಲ್ಲರ್ಗಳ ಮುಖಾಂತರ ಉಳುಮೆ ಮಾಡುವುದು ಸಾಧ್ಯ.
ಫ್ರೂನಿಂಗ್ ಮಾಡುವುದಕ್ಕೆ ಜಪಾನ್ ತಂತ್ರಜ್ಞಾನದ ಮ್ಯಾನುವಲ್ ಫ್ರೂನರ್, ಎಂಜಿನ್ ಅಳವಡಿಸಿದ ಪ್ರೂನರ್ಗಳು ದೊರೆಯುತ್ತವೆ. ಇವುಗಳು ಸುದೀರ್ಘ ಸಮಯ ಕೆಲಸ ಮಾಡುವುದರ ಬಗ್ಗೆ ರೈತ ವಲಯದಲ್ಲಿ ಮೆಚ್ಚುಗೆಯಿದೆ. ಇದರ ಜೊತೆಗೆ ಪ್ಲಾಂಟೇಷನ್ಗಳಲ್ಲಿ ನಾಟಾ ಮಾಡಲು, ರೆಂಬೆ-ಕೊಂಬೆ ಸವರಲು ಹೆವಿ ಡ್ಯೂಟಿ ಚೈನ್ ಸಾ ಗಳ ಲಭ್ಯತೆಯಿದೆ. ಗಿಡಗಳನ್ನು ನೆಡುವುದಕ್ಕೆ ಅಗತ್ಯವಾದ ಡ್ರಿಲಿಂಗ್ಗಳೂ ದೊರೆಯುತ್ತವೆ. ಈಗ ಕೃಷಿಕಾಮರ್ಿಕರ ಕೊರತೆ ಅಗಾಧ. ಹೀಗಿರುವಾಗ ಕುಶಲ ಕಾರ್ಮಿಕರ ಸಂಖ್ಯೆ ಕಡಿಮೆ. ಕಾಫಿ ಕೊಯ್ಲು ಸಮಯದಲ್ಲಿ ಇಂಥವರ ಕೊರತೆಯಿಂದ ಆಗುವ ಸಮಸ್ಯೆ ಅಪಾರ. ಇದನ್ನು ಪರಿಹರಿಸಲು 'ಕಾಫಿ ಕೊಯ್ಯುವ ಗಲೀವರ್ ಯಂತ್ರ' ಪರಿಚಯಿಸಲಾಗಿದೆ. ಇದರ ಬಗ್ಗೆ ಕಾಫಿ ಬೆಳೆಗಾರರು ಹರ್ಷ ವ್ಯಕ್ತಪಡಿಸಿದ್ದಾರೆ. ನಾಲ್ಕು ಮಂದಿ ಕೃಷಿಕಾಮರ್ಿಕರು ಮಾಡುವ ಕಾರ್ಯವನ್ನು ಇದೊಂದೆ ಯಂತ್ರ ಮಾಡುತ್ತದೆ. ಸಣ್ಣ ಪ್ರಮಾಣದಿಂದ ಹಿಡಿದು ದೊಡ್ಡ ಪ್ರಮಾಣದ ವಿವಿಧ ರೀತಿಯ ತೋಟ, ಪ್ಲಾಟೇಷನ್ಗಳಿಗೆ ಅಗತ್ಯವಾದ ಎಲ್ಲ ರೀತಿಯ ಉಪಕರಣಗಳು ಅಗ್ರಿಮಾರ್ಟ್'ನಲ್ಲಿ ಲಭ್ಯ. 'ತೆಂಗು-ಅಡಿಕೆ ಮರ ಸಲಿಸಾಗಿ ಏರಿ ಕೊಯ್ಲು ಮಾಡುವ ಯಂತ್ರವಿದ್ದರೆ ಒಳಿತೆಂದು ಅನೇಕ ಕೃಷಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಿಂದ ನಡೆದ ಸಂಶೋಧನೆ ಮುಖ್ಯ ಘಟ್ಟಕ್ಕೆ ಬಂದಿದೆ. ಸದ್ಯದಲ್ಲಿಯೇ ಅನುಕೂಲಕರವಾದ ಇಂಥ ಉಪಕರಣಗಳನ್ನು ಪರಿಚಯಿಸುತ್ತೇವೆ' ಎಂದು ವಾಸುದೇವಮೂರ್ತಿ ಅವರು ತಿಳಿಸುತ್ತಾರೆ
ಕ್ಷೇತ್ರ ಬೆಳೆಗಳಾದ ಭತ್ತ, ಗೋಧಿ, ಜೋಳ ಇತ್ಯಾದಿ ಬೆಳೆಗಳ ಕೊಯ್ಲಿಗೆ ಅನುಕೂಲಕರವಾದ 'ಮಲ್ಟಿಕ್ರಾಪ್ ಹಾರ್ವೆಸ್ಟರ್'ಸಹ ಅಗ್ರಿಮಾರ್ಟ್ ಪರಿಚಯಿಸಿರುವುದು ಗಮನಾರ್ಹ. ಇದರಿಂದ ಕಳೆ ತೆಗೆಯಬಹುದು, ಬೆಳೆ ಕೊಯ್ಲು ಕೂಡ ಮಾಡಬಹುದು.
ಅಗ್ರಿಮಾರ್ಟ್ ಸ್ಥಾಪನೆ ಉದ್ದೇಶ:
ವಿದೇಶದ ಅತ್ಯುತ್ತಮ ಗುಣಮಟ್ಟದ ಕೃಷಿಯಂತ್ರೋಪಕರಣಗಳನ್ನು ಮಾರಾಟ ಮಾಡುವ ಜೊತೆಗೆ ಇದೇ ಸಂದರ್ಭದಲ್ಲಿ ಭಾರತೀಯ ಕೃಷಿಕರ ಅಗತ್ಯಗಳನ್ನು ಪೂರೈಸುವ ಯಂತ್ರೋಪಕರಣಗಳ ಸಂಶೋಧನೆ, ತಯಾರಿಕೆ-ಮಾರಾಟ ಇವೆಲ್ಲ ಪರಿಕಲ್ಪನೆಗಳ ಸಂಮಿಶ್ರಣ 'ಅಗ್ರಿಮಾರ್ಟ್' ಇಡೀ ರಾಷ್ಟ್ರದಲ್ಲಿಯೇ ಇಂಥ ಪರಿಕಲ್ಪನೆ ಇಟ್ಟುಕೊಂಡು ಪ್ರಾರಂಭವಾದ ವ್ಯವಸ್ಥೆ ವಿರಳ. ಇಲ್ಲಿಗೆ ಭೇಟಿ ನೀಡುವ ಕೃಷಿಕರು ತಮಗೆ ಅಗತ್ಯವಾದ ಯಂತ್ರೋಪಕರಣಗಳನ್ನು ಒಂದೇ ಸ್ಥಳದಲ್ಲಿ ಖರೀದಿಸುವುದು ಸಾಧ್ಯವಾಗುತ್ತದೆ. ರೈತರು ಬಯಸಿದ್ದಲ್ಲಿ ಇವರ ಸ್ಥಳಗಳಿಗೆ ಹೋಗಿ ಅವಶ್ಯಕ ಉಪಕರಣಗಳ ಪ್ರಾತ್ಯಕ್ಷಿಕೆ ನೀಡುವ ವ್ಯವಸ್ಥೆ ಇಲ್ಲಿದೆ. ಇದರ ಜೊತೆಗೆ ಖರೀದಿಸಿದ ನಂತರ ಸೇವಾ ವ್ಯವಸ್ಥೆ ಜಾಲ ಇಡೀ ರಾಷ್ಟ್ರದಲ್ಲಿದೆ. ಇವೆಲ್ಲದರಿಂದಾಗಿ ರೈತರು ಒಂದೆಡೆಯಿಂದ ಇನ್ನೊಂದೆಡೆಗೆ ಅಲೆಯುವ ಅನಗತ್ಯ ಶ್ರಮ ನಿವಾರಣೆಯಾಗಿದೆ.
ಸ್ವಾವಲಂಬನೆ:
ಅಗ್ರಿಮಾರ್ಟ್ ಮೂಲಕ ಉಪಕರಣಗಳನ್ನು ಖರೀದಿಸಿದ ರೈತರು ಸ್ವಾವಲಂಬಿ ಬದುಕು ಸಾಗಿಸುತ್ತಿರುವ ಉದಾಹರಣೆ ಅನೇಕ. ಓಲಿಯೋಮ್ಯಾಕ್ ಅಂಥ ಉಪಕರಣಗಳನ್ನು ತಮ್ಮ ತೋಟದಲ್ಲಿ ಬಳಸಿದ ನಂತರ ಇತರ ತೋಟಗಳಿಗೂ ಬಾಡಿಗೆ ನೀಡಿ ಹೆಚ್ಚುವರಿ ಹಣ ಸಂಪಾದಿಸುತ್ತಿರುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ದಕ್ಷಿಣ ಕನ್ನಡದಲ್ಲಿ ಓಲಿಯೋಮ್ಯಾಕ್ ಕಳೆಕೊಚ್ಚುವ ಒಂದು ಯಂತ್ರದ ಮೂಲಕ ಕೆಲಸ ಪ್ರಾರಂಭಿಸಿದ ಯುವಕರನೇಕರು ಹತ್ತಾರು ಮಂದಿ ನಿರುದ್ಯೋಗಿಗಳಿಗೆ ಕೆಲಸ ನೀಡಿದ ಉದಾಹರಣೆಗಳು ಸಾಕಷ್ಟಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಅನ್ನಪೂರ್ಣ ಹೌಸ್, ನಂ.1/ಐಜಿ, ನ್ಯೂ ಗುಡ್ಡದಹಳ್ಳಿ,
ಮೈಸೂರು ರಸ್ತೆ, ಬೆಂಗಳೂರು-560 026
080-26753601/02
Please let us know the machine's price estaguttade horticultural spray medicine and how much that grant-in-aid from the State
ReplyDeletePlease display the cost of the small tiller shown in above picture 1 and govt grant availablility & procedure
ReplyDeleteಇನ್ನೂ ಹೆಚ್ಚಿನ ಸಣ್ಣ ಸಣ್ಣ ಯಂತ್ರಗಳನ್ನು ತರಿಸಬೇಕೆಂದು ವಿನಂತಿ
ReplyDelete