ತೋಟಕ್ಕೆ ಮಲ್ಚಿಂಗ್ ಮಂತ್ರ

ಹುಬ್ಬಳ್ಳಿ ಕೈಗಾರಿಕಾ ಪ್ರದೇಶವಾದ ತಾರೀಹಾಳ್‌ ಸಮೀಪದ ರವದಿ ಹಾಳ್‌ ಮತ್ತು ಗೋಕುಲ್‌ನಲ್ಲಿ ರೈತ ವಿರೂಪಾಕ್ಷ ಅವರ ತೋಟಗಳಿವೆ. ನಾವು ತಂಡವಾಗಿ ಹೋಗಿದ್ದೆವು. ತೋಟ ಹುಬ್ಬಳ್ಳಿಗೆ ಸುಮಾರು 30 ಕಿಲೋಮೀಟರ್‌ ದೂರದಲ್ಲಿದೆ. ಬೈಪಾಸ್‌ನ ಕಚ್ಚಾ ರಸ್ತೆಯಲ್ಲಿ ಸಾಗಿದ್ದು ರೋಚಕವಾಗಿತ್ತು. ವಿಜಯ್‌ ಕುಮಾರ್‌, ರಾಘವ ತೆರೆದ ಕಮಾಂಡರ್‌ ಜೀಪಿನಲ್ಲಿ ನಿಂತು ಪ್ರಯಾಣಿಸಿದ್ದು ಜಂಗಲ್‌ ಟ್ರಾವೆಲ್‌ ಅನುಭವ.
ಮೊದಲ ಭೇಟಿ ರವದಿಹಾಳ್‌ ತೋಟಕ್ಕೆ. ಜೊತೆಯಲ್ಲಿ ರೈತ ವಿರೂಪಾಕ್ಷಪ್ಪ, ಮಗ ಗಿರೀಶ್‌ ಇದ್ದರು. ವಿರೂಪಾಕ್ಷಪ್ಪ ಕರ್ನಾಟಕ ವಿದ್ಯುಚಕ್ತಿ ಮಂಡಳಿಯಲ್ಲಿ ಎಂಜಿನಿಯರ್‌ ಆಗಿದ್ದರು. ನಿವೃತ್ತಿ ನಂತರ ಪೂರ್ಣ ಪ್ರಮಾಣದಲ್ಲಿ ಕೃಷಿಕ. ತಂದೆಯ ಆಸಕ್ತಿಗೆ ಮಗ ಗಿರೀಶ್‌ ಜೊತೆಯಾಗಿದ್ದಾರೆ. ಗಿರೀಶ್‌ ಕೂಡ ಎಂಜಿನಿಯರ್‌. ತೋಟ ಹೊಕ್ಕೊಡನೆ ಗಮನ ಸೆಳೆಯುವುದು ಸೊಂಟದೆತ್ತರದ ಕಾಡು ಹುಲ್ಲು. 22 ಎಕರೆ ವಿಸ್ತೀರ್ಣದ ತುಂಬ ಹುಲ್ಲು ಆವರಿಸಿದೆ. ತೋಟಕ್ಕೆ ಮೊದಲ ಸುತ್ತಿನ ಬೇಲಿಯಾಗಿ ಫೆನ್ಸಿಂಗ್‌, ಎರಡನೆ ಸುತ್ತಿಗೆ ಜೀವಂತ ಬೇಲಿ ಗ್ಲಿರೀಸಿಡಿಯಾ ಗಿಡಗಳೂ ದಟ್ಟವಾಗಿವೆ.

ಇಲ್ಲಿನ ಮಣ್ಣು ಮಸ್ಸಾರಿ. ಇದಕ್ಕೆ ದೀರ್ಘ‌ಕಾಲ ನೀರು ಹಿಡಿದಿಡುವ ಗುಣವಿಲ್ಲ. ಹಾಗಂತ ಗಿಡ-ಮರಗಳು ಬಾಡಿಲ್ಲ. ಎಲೆಗಳು ಹಚ್ಚಹಸಿರಿನಿಂದ ನಗುತ್ತಿವೆ.ಫೋಟೂ ಸಿಂಥೆಸಿಸ್‌ ಚೆನ್ನಾಗಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ತೋಟದಲ್ಲಿ ಚಿಕ್ಕು(ಸೋಟಾ) ತೆಂಗು ಮತ್ತು ಅಡಿಕೆ ಗಿಡಗಳು ಫಸಲು ನೀಡುತ್ತಿವೆ. ಇಲ್ಲಿಯ ತೆಂಗಿಗೆ ನುಸಿಬಾಧೆ ತಟ್ಟಿಲ್ಲ. ಅಡಿಕೆಗೆ ಕೊಳೆರೋಗ ಕಿಂಚಿತ್ತೂ ಇಲ್ಲ. ಸಪೊಟಾಕ್ಕೆ ಸಸ್ಯರೋಗ, ಕೀಟಬಾಧೆಯಿಲ್ಲ. ಇದೆಲ್ಲ ಹೇಗೆ ಸಾಧ್ಯವಾಯಿತು ಎನ್ನುವುದರಲ್ಲೇ ವಿರೂಪಾಕ್ಷರ ಯಶಸ್ಸಿನ ಗುಟ್ಟಿದೆ.

ಕೃಷಿಹೊಂಡ

ನಡೆಯುತ್ತಾ ಹೋದಂತೆ ಫಕ್ಕನೆ ಒಂದೆಡೆ ನಿಲ್ಲಿಸಿದ ವಿರೂಪಾಕ್ಷಪ್ಪಅಲ್ಲಿ ಕೃಷಿ ಹೊಂಡ ತುಂಬಿದೆ ಎಂದರು. ಅತ್ತ ನೋಡಿದರೆ ಸುತ್ತಲೂ ಕಾಡು ಹುಲ್ಲಿನ ಹೊದಿಕೆ. ಹತ್ತಿರ ಹೋದಾಗ ವಿಶಾಲವಾದ ಹೊಂಡದಲ್ಲಿ ಎಳನೀರಿನಂಥ ನೀರು. ಮಳೆ ನೀರು ಸಂಗ್ರಹಣೆಗಾಗಿ ಈ ತೋಟದಲ್ಲಿ ಇಂಥ ಮೂರು ಹೊಂಡಗಳಿವೆ. ಆದರೆ ನೀರನ್ನು ಕೃಷಿಗಾಗಿ ಬಳಸುತ್ತಿಲ್ಲ. ಮಳೆಗಾಲ ಕಳೆದಂತೆ ನಿಧಾನವಾಗಿ ಹಿಂಗತೊಡಗುವ ಕೃಷಿ ಹೊಂಡಗಳು ಅಲ್ಲಿಯ ಅಂತರ್ಜಲ ಹೆಚ್ಚಿಸಲು ತಮ್ಮದೇ ಕಾಣಿಕೆ ನೀಡುತ್ತಿವೆ. ಕೇವಲ ಎಂಭತ್ತು ಅಡಿಗೇ ಇಲ್ಲಿ ನೀರೋ ನೀರು. ಇಡೀ ತೋಟಕ್ಕೆ ಹನಿ ನೀರಾವರಿ ಇರುವುದರಿಂದ ನೀರು ಪೋಲಾಗುವುದಿಲ್ಲ.

ತೋಟದ ಕೆಳಗೆ ಹಸಿರೇ ಉಸಿರು

ಅಡಿಕೆ ಸಸಿಗಳು ದಕ್ಷಿಣ ಕನ್ನಡದ ತೋಟದ ಸಸಿಗಳಿಗಿಂತ ಹೆಚ್ಚು ಹಸಿರಾಗಿ ಸಮೃದ್ಧವಾಗಿವೆ. ಇವಕ್ಕೆ ಯಾವುದೇ ಕ್ರಿಮಿ,ಕೀಟ, ರೋಗಬಾಧೆ ಇಲ್ಲ. ತೋಟದ ನೆಲಹಾಸು ಕಿಂಚಿತ್ತೂ ಕಾಣಗೊಡದಂತೆ ಹಸಿರು ಬಳ್ಳಿ ಹಬ್ಬಿದೆ. ಸಾಮಾನ್ಯವಾಗಿ ಇದನ್ನು ರಬ್ಬರ್‌ ತೋಟದಲ್ಲಿ ಹಾಕಿರುತ್ತಾರೆ. ಒಮ್ಮೆ ಹಾಕಿದರೆ ತಂತಾನೆ ಸಮೃದ್ಧವಾಗಿ ಹಬ್ಬುತ್ತಾ ಹೋಗುವ ಬಳ್ಳಿ ಇದು. ವೆಲ್ವೆಟ್‌ ಬಳ್ಳಿಯಂತೆ ಮರಕ್ಕೆ ತಬ್ಬಿಕೊಂಡು ಬೆಳೆಯುವುದಿಲ್ಲ. ನೆಲದಲ್ಲಿ ಮಾತ್ರ ಹಬ್ಬುತ್ತಾ ಹೋಗುತ್ತದೆ.

ತೋಟದ ಸಹಜ ಜೀವಿಗಳ ಚಟುವಟಿಕೆ

ಮಂಡಿಯೆತ್ತರಕ್ಕೆ ಬೆಳೆದು ನಿಂತ ಬಳ್ಳಿ ಕೆಳಗಿರುವ ನೆಲ ಹೇಗಿದೆಎಂದು ನೋಡುವ ತವಕ ಸ್ನೇಹಿತ ಆಲೂರು ವಿಜಯ್‌ಕುಮಾರ್‌ಗೆ ಶುರು ವಾಯಿತು. ಬಳ್ಳಿಯನ್ನು ಸ್ವಲ್ಪ ಸರಿಸಿದಾಗ ತೋಟದ ಮಿತ್ರ ಎರೆಹುಳು-ಕೀಟಗಳು ನೆಮ್ಮದಿಯಿಂದ ತಮ್ಮ ಚಟುವಟಿಕೆ ನಡೆಸುತ್ತಿವೆ. ಮಣ್ಣು ಹತ್ತಿಯಷ್ಟೆ ಮೃದು. ನೆಲಹಾಸು ಮೇಲೆ ಕಾಲಿಟ್ಟರೆ ಗಾದಿ ಮೇಲೆ ನಡೆದಂಥ ಅನುಭವ. ಅಡಿಕೆ ಫಸಲು ಕೊಯುವುದಕ್ಕೆ ವೀಡ್‌ ಕಟರ್‌ ಬಳಸುವುದರಿಂದ ಬಳ್ಳಿ-ಎಲೆಗಳು ಸಣ್ಣದಾಗಿ ತುಂಡಾಗುತ್ತವೆ. ಇದನ್ನೆ ಮತ್ತೆ ಅಡಿಕೆ ಬುಡಗಳ ಸುತ್ತಲೂ ಹೊದಿಸುತ್ತಾರೆ. ಇದು ಶೀಘ್ರವಾಗಿ ಕಳಿತು ಗೊಬ್ಬರವಾಗುತ್ತದೆ.

ತೋಟದಲ್ಲಿ ಉಳುಮೆ ಮಾಡುವುದು ಎರೆಹುಳುಗಳು. ತೋಟದ ಎಲ್ಲಡೆ ಈ ಸಹಜ ಉಳುಮೆ ಕಾರ್ಯ ನಡೆಯುತ್ತಿರುವುದರಿಂದಲೇ ಮಳೆ ನೀರು ಮಣ್ಣಿನಾಳಕ್ಕೆ ಮತ್ತು ಗಿಡ-ಮರಗಳ ಬೇರಿಗೆ ಪೂರೈಕೆಯಾಗುವುದು ಸಾಧ್ಯವಾಗಿದೆ. ಇಲ್ಲಿರುವ ಅಸಂಖ್ಯಾತ ಎರೆಹುಳುಗಳೇ ತೋಟಕ್ಕೆ ಸಹಜವಾದ ರೀತಿಯಲ್ಲಿ ಎರೆಗೊಬ್ಬರ ನೀಡಿತ್ತಿವೆ. ಇದರಿಂದ ಕೃತಕ ರೀತಿ ಎರೆಗೊಬ್ಬರ ಪೂರೈಸಬೇಕಾದ ಪ್ರಮೇಯವೇ ಇಲ್ಲ.

ಇವರ ಇನ್ನೊಂದು ತೋಟ ಗೋಕುಲ್‌ನಲ್ಲಿದೆ. ತೆಂಗು, ಅಡಿಕೆ, ಸಪೋಟಾ, ಮಾವು ಮತ್ತು ಬಾಳೆ ಬೆಳೆಗಳಿವೆ. ತೋಟದ ಬೇಲಿಯಲ್ಲಿ ನಿಂಬೆ ಗಿಡಗಳಿವೆ. ಬೇಲಿ ಪಕ್ಕದಲ್ಲಿ ತೇಗವಿದೆ. ಮರ-ಗಿಡಗಳಿಗೆ ವೆಲ್ವೆಟ್‌ ಬಳ್ಳಿ ಸಮೃದ್ದವಾಗಿ ಹಬ್ಬಿದೆ. ಇದಕ್ಕೆ ಪೈ±ೋಟಿ ನೀಡುವಂತೆ ಸ್ಥಳೀಯ ಬಳ್ಳಿಯೊಂದು ಹಬ್ಬಿದೆ.ನಾಟಿ ಬಾಳೆ ಗಿಡಗಳಿಗೆ ಇದು ತಬ್ಬಿ ಹಬ್ಬಿರುವುದು ಗಮನ ಸೆಳೆಯುತ್ತದೆ. ಇದರ ಹೆಸರು ಯಾರಿಗೂ ತಿಳಿಯಲಿಲ್ಲ. ಆದ್ದರಿಂದ ರಾಘವ, ಈ ಬಳ್ಳಿಗೆ ವಿರೂಪಾಕ್ಷಪ್ಪ ಬಳ್ಳಿಯಂದೇ ಕರೆಯೋಣ ಎಂದಾಗ ಎಲ್ಲರಿಗೂ ನಸುನಗು.

ನಾಟಿ ಹಸು ಜೊತೆಯಲ್ಲಿ ಸಿಮೇ ಹಸುಗಳು

ಕಾಂಕ್ರಿಜ್‌, ದೇವಣಿ ತಳಿಗಳ ಹೋರಿ ಮತ್ತು ಹಸುಗಳನ್ನು ಪಾಲನೆಯೂ ವಿರೂಪಾಕ್ಷ ಮಾಡುತ್ತಿದ್ದಾರೆ. ಜೊತೆಗೆ ಹೆಚ್‌.ಎಫ್‌ ತಳಿಯ ಹಸುಗಳೂ ಇವೆ. ಕಾಂಕ್ರಿಜ್‌ ತಳಿಯ ರಾಸುಗಳ ಆಕಾರ ಹೆಚ್‌.ಎಫ್‌ ಮತ್ತು ಜರ್ಸಿ ಹಸುಗಳನ್ನು ಮೀರಿಸುತ್ತದೆ. ಇವುಗಳನ್ನು ಹಾಲು ಮತ್ತು ಸಗಣಿ ಗೊಬ್ಬರದ ಸಲುವಾಗಿ ಬೆಳೆಧಿಸಿಧಿದ್ದಾಧಿರೆ. ಎರಡೂ ತೋಟವೂ ಸೇರಿ ನಲ್ವತ್ತ ನಾಲ್ಕು ಎಕರೆಯಿದೆ. ಇಲ್ಲಿಯ ಗಿಡ-ಮರಗಳಿಗೆ ಅತ್ಯಲ್ಪ ಪ್ರಮಾಣದಲ್ಲಿ ಸಗಣಿ ಗೊಬ್ಬರ ನೀಡುತ್ತಾರೆ. ಇದರ ಹೊರತಾಗಿ ಮತ್ಯಾವ ಗೊಬ್ಬರವನ್ನೂ ನೀಡುವುದಿಲ್ಲ ಎನ್ನುವುದೇ ವಿಶೇಷ ಎರಡೂ ತೋಟ ಸುತ್ತು ಹೊಡೆದ ನಂತರ ನಮಗೆ ಅನೇಕ ಪ್ರಯೋಗಗಳು ತಲೆಗೆ ಹೊಕ್ಕವು. ಮನಸ್ಸು ಮಾತ್ರ ವಿರೂಪಾಕ್ಷರ ತೋಟದಲ್ಲಿತ್ತು.
ಹೆಚ್ಚಿನ ಮಾಹಿತಿಗೆ ವಿರೂಪಾಕ್ಷಪ್ಪ ಮೊ.94488-63013.


ಹಸಿರು ಹೊದಿಕೆ

ಎರಡೂ ತೋಟಗಳಿಗೆ ರಸಗೊಬ್ಬರ-ಕೀಟನಾಶಕಗಳ ಸೋಂಕಿಲ್ಲ. ಸಗಣಿ ಗೊಬ್ಬರ ನೀಡುವುದು ಅತ್ಯಲ್ಪ ಪ್ರಮಾಣದಲ್ಲಿ. ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸುವುದಿಲ್ಲ. ಆದರೂ ತೋಟಗಳು ಸಮೃದ್ಧವಾಗಿ-ಕ್ರಿಮಿ-ಕೀಟ ಬಾಧೆ ಮುಕ್ತವಾಗಿರಲು ಕಾರಣವೇನು? ಕಡಿಮೆ ಹಸ್ತಕ್ಷೇಪ ಮತ್ತು ಸಂಪೂರ್ಣ ಮಲಿcಂಗ್‌(ಹಸಿರು ಹೊದಿಕೆ) ಇದೇ ನಮ್ಮ ತೋಟದ ಅಭಿವೃದಿಗೆ ಕಾರಣ ಎನ್ನುತ್ತಾರೆ ವಿರೂಪಾಕ್ಷಪ್ಪ. ರಸಗೊಬ್ಬರ-ಕೀಟನಾಶಕ ಬಳಸಿದರೆ ತೋಟದ ಗಿಡ-ಮರಗಳು ಇದಕ್ಕೆ ಹೊಂದಿಕೊಳ್ಳುತ್ತವೆ. ಪ್ರತಿವರ್ಷ ಇದರ ಪ್ರಮಾಣ ಹೆಚ್ಚಿಸಬೇಕು. ನೀರು ಪೂರೈಕೆಯೂ ಹೆಚ್ಚು. ಇದರಿಂದ ಕ್ರಿಮಿ-ಕೀಟ ಬಾಧೆ ಕಾಡುತ್ತದೆ. ಆಗ ಕ್ರಿಮಿನಾಶಕಗಳ ಸಿಂಪಡಣೆ ಮಾಡಬೇಕಾಗುತ್ತದೆ. ಆದ್ದರಿಂದ ರಾಸಾಯನಿಕ ಆಧಾರಿತ ಕೃಷಿ ಒಂದು ವಿಷ ಚಕ್ರ: ಒಮ್ಮೆ ಇದಕ್ಕೆ ಸಿಲುಕಿದರೆ ಬಿಡಿಸಿಕೊಳ್ಳುವುದು ಕಷ್ಟ. ಆದರೆ ಸಹಜ- ಸಾವಯವ ಕೃಷಿ ಪದ್ಧತಿಯಲ್ಲಿ ಇಂಥ ತೊಂದರೆಗಳಿಲ್ಲ.

ವಿರೂಪಾಕ್ಷಪ್ಪರ ಗೋಕುಲ್‌ ತೋಟದಲ್ಲಿ ಬಸವನ ಹುಳುಗಳ ಕಾಟ ಹೆಚ್ಚಿದೆ. ಇದರ ನಿವಾರಣೆಗೆ ಅವರು ಯಾವುದೇ ರಾಸಾಯನಿಕ ಕೀಟನಾಶಕಗಳನ್ನು ಬಳಸಿಲ್ಲ. ಪ್ರಕೃತಿಯೇ ಇದಕ್ಕೆ ರೆಮಿಡಿ ಎನ್ನುಧಿತ್ತಾರೆ. ಇವರ ತೋಟಗಳು ಕೃಷಿಯ ಪ್ರಯೋಗ ಶಾಲೆಯಂತಿದೆ.

ಸಾವಯವ ಭೋಜನ

ವಿಷರಹಿತ ಹಣ್ಣು-ಹಂಪಲು ಸಾರ್ವಜನಿಕರಿಗೆ ತಿನ್ನಲು ದೊರೆಯಬೇಕು. ಹಣ್ಣು- ಹಂಪಲುಗಳ ಸಹಜವಾದ ರುಚಿ ಯನ್ನು ಅವರು ತಿಳಿಯಬೇಕು ಎಂಬ ಹಂಬಲ ವಿರೂಪಾಕ್ಷ ಅವರದು. ಆದ್ದರಿಂದಲೇ ಮನೆ ಯಲ್ಲಿಯೇ ತಮ್ಮ ತೋಟದ ಉತ್ಪ$ನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಒಮ್ಮೆ ಮಾರು ಕಟ್ಟೆಗೆ ಹೋದರೆ ಫಸಲನ್ನು ನಿರಾಯಾಸವಾಗಿ ಮಾರಾಟ ಮಾಡಿ ಹಣ ಎಣಿಸಿಕೊಳ್ಳಬಹುದು. ಆದರೆ ಈ ಸುಲಭದ ಮಾರ್ಗಕ್ಕೆ ಇವರು ಮನಸು ಮಾಡಿಲ್ಲ. ನಿತ್ಯವೂ ಇವರ ಮನೆಯಲ್ಲಿ ಸಾವಯವ ಭೋಜನ.

No comments:

Post a Comment

ವಿಡಿಯೋ